ಗೇಟಿನಲ್ಲಿ ೧೦ ರುಪಾಯಿ ನನಗೆ, ೫ ರುಪಾಯಿ ಬೈಕಿಗೆ ಟಿಕೆಟ್ ತೊಗೊಂಡು ಒಳಬಂದರೆ, ಯಾವ ದಿಕ್ಕಿಗೆ ಹೋಗಬೇಕೆಂಬ
ಕನ್ ಪ್ಯೂಷನ್ನು, ಎತ್ತ ತಿರುಗಿದರೂ ಹಸಿರೆ - ಉಸಿರು. ಬೆನ್ನ ಹಿಂದೆ ಅಷ್ಟೇತ್ತರಕೆ ಎದ್ದು ನಿಂತ ಬೆಟ್ಟ. ಆ ಬೆಟ್ಟದ ಎದೆಯ ಮೇಲೊಂದು ಮಂಟಪ. ಮಂಟಪದ ತುಂಬಾ ಪ್ರೇಮಿಗಳ ಕಲರವ. ಬದುಕಿನ ಅನಿವಾರ್ಯತೆಗೆ ಯಂತ್ರದಂತಾದ ಮನುಷ್ಯನ ನವಿರು ಭಾವನೆಗಳ ಅನಾವರಣ. ಹಸಿರು ಮೈದುಂಬಿ, ಹೂಗಳು ಅರಳಿ, ಉದ್ಯಾನನಗರ ಎಂಬ ಮಾತಿಗೆ ಜೀವಂತ ಸಾಕ್ಷಿಯಂತೆ ಗಾಜಿನ ಮನೆಯನ್ನೂ, ಕಾರಂಜಿಯನ್ನು, ಜೊತೆ ಜೊತೆಗೆ ಪ್ರೇಮಿಗಳನ್ನು ತನ್ನ ತಂಪಾದ ಮಡಿಲಲ್ಲಿ ಹಿಡಿದಿಟ್ಟುಕೊಂಡ ಲಾಲ್ ಬಾಗಿನಲ್ಲಿ ಬಹುಶ: ನಾನೊಬ್ಬನೇ ಏಕಾಂಗಿ. ಜೀವಂತಿಕೆಯಿಂದ ನಳನಳಿಸುವ ಮರದಲ್ಲೊಂದು ಒಣಗಿ ನಿಂತ ರೆಂಬೆಯಂತೆ!!!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ